
ನಮ್ಮ ಕುರಿತು
Vedic Siddhi-Based Astrologer & Numerologist
ಮನೋ ಗುರು ಶ್ರೀ ನಾಗರಾಜ ಕೋಟೆ
ಕನ್ನಡ ಸಿನೆಮಾ ರಂಗದ ಹಿರಿಯ ನಟರು, ನಿರ್ದೇಶಕರು ಹಾಗೂ ಸಾಹಿತಿಗಳಾದ ಮನೋ ಗುರು ಶ್ರೀ ನಾಗರಾಜ ಕೋಟೆಯವರ ಮನೋ ಆಸ್ಟ್ರೋ ಜ್ಯೋತಿಷ್ಯ ಕೇಂದ್ರ ಬದುಕಿನಲ್ಲಿ ಸಂತೋಷ ಮತ್ತು ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸುಲಭ ಮತ್ತು ಶತಸಿದ್ಧ ಉಪಾಯಗಳನ್ನು ನೀಡುತ್ತದೆ. ವೈದಿಕ ಸಿದ್ಧಿ ಮಾತ್ರವಲ್ಲದೇ, ಮನೋವೈಜ್ಞಾನಿಕ ತತ್ವಗಳ ಮೂಲಕ ವೈಯಕ್ತಿಕ, ಸರ್ವತೋಮುಖ ಬೆಳವಣಿಗೆಯನ್ನು ಧ್ಯೇಯವಾಗಿಟ್ಟುಕೊಂಡು, ಜನ್ಮ ಪತ್ರ ಬರೆವಣಿಗೆ, ಕುಂಡಲಿ ಹೊಂದಾಣಿಕೆ & ವಿಶ್ಲೇಷಣೆ, ಸಂಖ್ಯಾಶಾಸ್ತ್ರ ಸೇರಿದಂತೆ ಹಲವು ಸೇವೆಗಳನ್ನು ಜನರಿಗೆ ಕೈಗೆಟಕುವಂತೆ ಹಾಗೂ ಮನಮುಟ್ಟುವಂತೆ ಮನವರಿಸಿಕೊಡುವ ಉತ್ತಮ ಕಾರ್ಯವನ್ನು ಮನೋ ಆಸ್ಟ್ರೋ ನಡೆಸಿಕೊಡುತ್ತಿದೆ. ಆರೋಗ್ಯ, ಉದ್ಯೋಗ, ಶಿಕ್ಷಣ, ವೈವಾಹಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ಇವರು ನೀಡುತ್ತಾರೆ.