
ಏನಿದು ಮನೋ ಆಸ್ಟ್ರೋ?
ಮನೋ ಆಸ್ಟ್ರೋ : ವೈದಿಕ ಸಿದ್ಧಿಯ ಜ್ಞಾನ-ವಿಜ್ಞಾನದ ಕಿರುನೋಟ
ಕನ್ನಡ ಸಿನೆಮಾ ರಂಗದಲ್ಲಿ ನಟ ಹಾಗೂ ಹಾಸ್ಯ ಕಲಾವಿದರಾಗಿ 28 ವರ್ಷಗಳ ಅನುಭವ ಹೊಂದಿರುವ ಕನ್ನಡದ ಹಿರಿಯ ನಟ ಮನೋ ಗುರು ಶ್ರೀ ನಾಗರಾಜ ಕೋಟೆ. ಪ್ರಚಲಿತ ವಿದ್ಯಮಾನಗಳನ್ನು ಹಾಸ್ಯಮಯವಾಗಿ ರೂಪಿಸಿ, 5000ಕ್ಕೂ ಹೆಚ್ಚು ಹಾಸ್ಯ ಕಾರ್ಯಕ್ರಮಗಳನ್ನು ಇವರು ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅವರು ತಮ್ಮ ಪ್ರತಿಭೆ ಮತ್ತು ಬುದ್ಧಿಯಿಂದ ಅಭಿಮಾನಿಗಳನ್ನು ಸೆಳೆಯುತ್ತಲೇ ಇದ್ದಾರೆ.
ಕೇವಲ ಸಿನೆಮಾ ಕ್ಷೇತ್ರದಲ್ಲಿಯಲ್ಲದೇ, ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿರುವ ಇವರು, ಕಳೆದ 15 ವರ್ಷಗಳ ಕಾಲ, ಶಾಸ್ತ್ರದ ಅಭ್ಯಾಸ ಮತ್ತು ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜ್ಯೋತಿಷ್ಯ ಸಮಾಲೋಚನೆಗಾಗಿಯೆಂದೇ ‘ಮನೋ ಆಸ್ಟ್ರೋ’ ಎಂಬ ವೇದಿಕೆಯನ್ನು ಕಟ್ಟಿಕೊಂಡು ಸಾಂಪ್ರದಾಯಿಕ ಜ್ಯೋತಿಷ್ಯ ಶಾಸ್ತ್ರದೊಂದಿಗೆ, ಆಧುನಿಕ ಮನೋವೈಜ್ಞಾನಿಕ ತತ್ವಗಳನ್ನು ಒಗ್ಗೂಡಿಸಿ, ಜನರಿಗೆ ಜೀವನದಲ್ಲಿ ಇನ್ನಷ್ಟು ಔನ್ನತ್ಯದತ್ತ ಸಾಗುವಂತೆ, ಸಮರ್ಥ ಪರಿಹಾರಗಳನ್ನು, ಮಾರ್ಗದರ್ಶನವನ್ನು ನೀಡುತ್ತಾರೆ.
ಆರೋಗ್ಯ, ಐಶ್ವರ್ಯ ಸಿದ್ಧಿ, ಉದ್ಯೋಗ ಮತ್ತು ವ್ಯವಹಾರ, ಸಂಬಂಧಗಳು, ಹೀಗೆ ಜೀವನದ ಸಮಗ್ರ ಪಥದ ಕುರಿತು ಸಮಗ್ರ ಸಲಹೆಯನ್ನು ಒದಗಿಸುವುದು ಮನೋ ಆಸ್ಟ್ರೋದ ಪರಿಣತಿ. ಬದುಕಿನಲ್ಲಿ ಹೆಚ್ಚಿನ ಸ್ಪಷ್ಟತೆ ಮತ್ತು ಸಮಾಧಾನವನ್ನು ಬಯಸುವ ಗ್ರಾಹಕರು ಕೋಟೆ ಅವರ ಸಮಾಲೋಚನೆಗಳ ಮೂಲಕ ಅಮೂಲ್ಯವಾದ ಒಳನೋಟಗಳನ್ನು ಕಂಡುಕೊಳ್ಳಬಹುದು. ಕಲಾತ್ಮಕ ದೃಷ್ಟಿಕೋನ, ಸಹಾನುಭೂತಿ ಮತ್ತು ಜ್ಯೋತಿಷ್ಯ ಸಿದ್ಧಿಯಲ್ಲಿನ ಪಾಂಡಿತ್ಯವನ್ನು ಮೈಗೂಡಿಸಿಕೊಂಡಿರುವ ಕೋಟೆಯವರು, ‘ಮನೋ ಗುರು’ ಎಂದೇ ಬಿರುದಾಂಕಿತರಾಗಿದ್ದರೆ. ಕಲಾತ್ಮಕ ಅಂತಃಪ್ರಜ್ಞೆ ಮತ್ತು ಜ್ಯೋತಿಷ್ಯ ಸಿದ್ಧಿಯ ಮೂಲಕ ಇವರು ಜೀವನದ ಜಟಿಲತೆಗಳನ್ನು ಸುಲಭವಾಗಿ ಎದುರಿಸುವಂತಹ ಪ್ರಾಯೋಗಿಕ ಪರಿಹಾರಗಳನ್ನು ನೀಡುತ್ತಾರೆ.