
ಜನ್ಮ ಪತ್ರ ವಿಶ್ಲೇಷಣೆ
ಮನೋ ಆಸ್ಟ್ರೋ ಜ್ಯೋತಿಷ್ಯ ಕೇಂದ್ರದಲ್ಲಿ ಮನೋ ಗುರು ಶ್ರೀ ನಾಗರಾಜ ಕೋಟೆಯವರು ಪ್ರಾಚೀನ ವೈದಿಕ ಸಿದ್ಧಿಯ ಆಧಾರದ ಮೇಲೆ ವ್ಯಕ್ತಿಯೊಬ್ಬರ ಜನನದ ಸಮಯದಲ್ಲಿ ಆಕಾಶಕಾಯಗಳ(ಗ್ರಹಗಳ) ನೆಲೆಯನ್ನು ವಿಶ್ಲೇಷಿಸಿ, ಆ ವ್ಯಕ್ತಿಯ ವ್ಯಕ್ತಿತ್ವ-ಲಕ್ಷಣಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು, ಇತ್ಯಾದಿ ವಿವರಗಳನ್ನೊಳಗೊಂಡ ಸಮಗ್ರ ಜಾತಕ ಪತ್ರಿಕೆಯನ್ನು ಬರೆದು ಕೊಡುತ್ತಾರೆ
ಜಾತಕ ಪತ್ರಿಕೆ ಬರೆಸಲು ನೀವು ನಿಮ್ಮ ಜನ್ಮ ದಿನಾಂಕ, ಜನಿಸಿದ ಸಮಯ ಮತ್ತು ಸ್ಥಳದ ವಿವರ ನೀಡಬೇಕು. ಈ ವಿವರಗಳು ನಿಖರವಾಗಿದ್ದಲ್ಲಿ ನಿಮ್ಮ ಜನ್ಮ ಪತ್ರಿಕೆಯನ್ನು ಸುಗಮವಾಗಿ ವಿಶ್ಲೇಷಿಸಿ, ಸಮಗ್ರ ವಿವರಗಳೊಂದಿಗೆ ಬರೆದುಕೊಡುತ್ತೇವೆ.
ಸಮಗ್ರ ಜನ್ಮ ಪತ್ರಿಕೆಯನ್ನು ಬರೆಸುವುದರಿಂದ ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು, ಜೀವನದಲ್ಲಿ ನಡೆದ ಹೋದ ಘಟನೆಗಳ ಹಿಂದಿನ ಸಾರವನ್ನು ಅರ್ಥಮಾಡಿಕೊಳ್ಳಬಹುದು. ಹಾಗೆಯೇ, ಮುಂಬರುವ ದಿನಗಳಲ್ಲಿ ಸಂಭವಿಸಬಹುದಾದ ಘಟನೆಗಳ ಮುನ್ನೋಟ ಪಡೆಯಬಹುದು. ಜನ್ಮ ಪತ್ರಿಕೆಯಲ್ಲಿನ ವಿವರಗಳ ಆಧಾರದ ಮೇಲೆ ಉದ್ಯೋಗ-ವ್ಯವಹಾರ, ಶಿಕ್ಷಣ, ಸಂಬಂಧಗಳ ಕುರಿತು ಸಶಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಸಮರ್ಥರಾಗುತ್ತೀರಿ.
ಜನ್ಮ ಪತ್ರ ವಿಶ್ಲೇಷಣೆಯು ಜೀವನದ ಸಂಭಾವ್ಯಗಳ ಒಳನೋಟಗಳನ್ನು ಒದಗಿಸುತ್ತದೆ. ಇದು ವ್ಯಕ್ತಿಯೊಬ್ಬರ ವ್ಯಕ್ತಿತ್ವದ ಮೂಲ ಲಕ್ಷಣಗಳ, ಅವರು ಜೀವನದಲ್ಲಿ ಎದುರಿಸಬೇಕಾಗಬಹುದಾದ ಸವಾಲುಗಳ ಕುರಿತು ನಮಗೆ ವಿವರಗಳನ್ನು ನೀಡುತ್ತದೆ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವ ಅಂಶಗಳನ್ನು ನಮಗೆ ದರ್ಶಿಸಿಕೊಡುತ್ತದೆ. ಜನ್ಮ ಪತ್ರಿಕೆಯು ವ್ಯಕ್ತಿಯ ಭವಿಷ್ಯವನ್ನು ಉತ್ತಮವಾಗಿಸುವಲ್ಲಿ ಪೂರಕವಾಗಿರುತ್ತದೆಯೇ ಹೊರತು ನಿಖರ ಭವಿಷ್ಯವಾಣಿಯಾಗಿರುವುದಿಲ್ಲ. ಯಾವುದೇ ವ್ಯಕ್ತಿಯು ಜನ್ಮ ಪತ್ರಿಕೆಯಲ್ಲಿನ ವಿವರಗಳನ್ನು ವಿಶ್ಲೇಷಿಸಿ ತೆಗೆಯುವ ನಿರ್ಧಾರಗಳ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ.